Marks with skills

Full 1
Full 1
Full 2
Full 2
Full 3
Nature
Why autumn leaves turn red? It's not easy being red!
Full 3
graduation-995042_1920
graduation-995042_1920
laptop-3087585_1920
laptop-3087585_1920
previous arrow
next arrow

ಸ್ಪರ್ಧಾತ್ಮಕ ಪರೀಕ್ಷೆಗೆ ಅವಶ್ಯಕವಿರುವ ಸಾಮಗ್ರಿಗಳನ್ನು ಒದಗಿಸಲಾಗಿದೆ.

PSI, Police Constable, KARTET,FDA,SDA ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗೆ ಅತ್ಯಂತ ವಿಶ್ವಾಸನೀಯ ಪೂರಕ ಮಾಹಿತಿಯನ್ನು ಒಳಗೊಂಡಿರುವ ಸಾಮಗ್ರಿಗಳನ್ನು ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ. ಗ್ರಾಮೀಣ ಭಾಗದಿಂದ ಹೆಚ್ಚಿನ ಅಭ್ಯರ್ಥಿಗಳು ಸರಕಾರಿ ಹುದ್ದೆಯನ್ನು ಪಡೆಯುಂತಾಗಿ ಸರಕಾರಿ ಸೇವೆಯನ್ನು ಪ್ರಾಮಾಣಿಕತೆಯಿಂದ ಹಾಗೂ ನಿಷ್ಠೆಯಿಂದ ಮಾಡುವ ನೌಕರರು ಹಾಗೂ ಅಧಿಕಾರಿ ವರ್ಗವನ್ನು ನೋಡುವಂತಾಗುವ ಉದ್ದೇಶವನ್ನು ಹೊಂದಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಪಠ್ಯಕ್ರಮಕ್ಕನುಗುಣವಾಗಿ ವಸ್ತುನಿಷ್ಠ ಮಾಹಿತಿಯೊಂದಿಗೆ ಪೂರಕವಾಗಿ ವಿವರಣೆಯನ್ನು ಒಳಗೊಂಡಂತೆ ಮಾಹಿತಿ ಸಂಗ್ರಹಿಸಿ ಒದಗಿಸಲಾಗುವುದು. ಅಲ್ಲದೇ ಹಿಂದಿನ ವರ್ಷದ ಪರೀಕ್ಷಾ ಪ್ರಶ್ನೆ ಪತ್ರಿಕೆಯನ್ನು ವಿವರಣೆಯೊಂದಿಗೆ ಬಿಡಿಸಲಾಗಿದೆ.

6ನೇ ತರಗತಿಯಿಂದ ರಿಂದ 10ನೇ ತರಗತಿಯವರೆಗಿನ ಗಣಿತ ಪಠ್ಯಪುಸ್ತಕದ ಸಮಸ್ಯೆಗಳನ್ನು ಬಿಡಿಸಲಾಗಿದೆ.

ಕರ್ನಾಟಕ ಪಠ್ಯಪುಸ್ತಕ ಸಂಘವು ಇತ್ತಿಚೀಗೆ ಅಂದರೆ 2020-2021ನೇ ಸಾಲಿನಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಹೊಸ  ಪಠ್ಯಪುಸ್ತಕವನ್ನು ಆಧರಿಸಿ ಪಠ್ಯಪುಸ್ತಕವನ್ನು ಹೊರ ತಂದಿರುತ್ತದೆ. ನಾವು ಈ ವೆಬ್‌ಸೈಟ್‌ ನಲ್ಲಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಗಣಿತ ವಿಷಯದ ಪಠ್ಯಪುಸ್ತಕದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಿರುತ್ತೇವೆ. ಪಠ್ಯದೊಂದಿಗೆ ವಿಡಿಯೋಗಳನ್ನು ಚಿತ್ರಿಕರಿಸಿ ಒದಗಿಸಲಾಗಿದೆ. ಇದು ಎಲ್ಲಾ ವಿದ್ಯಾರ್ಥಿಗಳಿಗೆ ಸ್ವಯಂ ಕಲಿಕೆಯ ಜೊತೆಗೆ ತಮ್ಮದೇ ವೇಗದೊಂದಿಗೆ ಕಲಿಯುವಿಕೆಯನ್ನು ಬೆಂಬಲಿಸುತ್ತದೆ. ಅಲ್ಲದೇ ಮಕ್ಕಳು ಪರೀಕ್ಷೆಯ ತಯ್ಯಾರಿಗೆ, ಕಿರು ಪರೀಕ್ಷೆ ತಯ್ಯಾರಿಗೆ ಹಾಗೂ ಮನೆಗೆಲಸವನ್ನು ಮಾಡಲು ಅನುಕೂಲಿಸುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಅವಶ್ಯಕವಿರುವ ಸಾಮಗ್ರಿಗಳನ್ನು ಒದಗಿಸಲಾಗಿದೆ.

PSI, Police Constable, KARTET, FDA, SDA ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗೆ ಅತ್ಯಂತ ವಿಶ್ವಾಸನೀಯ ಪೂರಕ ಮಾಹಿತಿಯನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಗ್ರಾಮೀಣ ಭಾಗದಿಂದ ಹೆಚ್ಚಿನ ಅಭ್ಯರ್ಥಿಗಳು ಸರಕಾರಿ ಹುದ್ದೆಯನ್ನು ಪಡೆದು ಸರಕಾರಿ ಸೇವೆಯನ್ನು ಪ್ರಾಮಾಣಿಕತೆಯಿಂದ ಹಾಗೂ ನಿಷ್ಠೆಯಿಂದ ಮಾಡುವ ನೌಕರರು ಹಾಗೂ ಅಧಿಕಾರಿ ವರ್ಗವನ್ನು ನೋಡುವಂತಾಗುವ ಉದ್ದೇಶದಿಂದ ಪೂರಕ ಮಾಹಿತಿಯನ್ನು ಒದಗಿಸಲು ಪ್ರಯತ್ನ ಮಾಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಪಠ್ಯಕ್ರಮಕ್ಕನುಗುಣವಾಗಿ ವಸ್ತುನಿಷ್ಠ ಮಾಹಿತಿಯೊಂದಿಗೆ ಪೂರಕವಾಗಿ ವಿವರಣೆಯನ್ನು ಒಳಗೊಂಡಂತೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಹಿಂದಿನ ಸಾಲಿನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ವಿವರಣೆಯೊಂದಿಗೆ ಬಿಡಿಸಲಾಗಿದೆ.

HRMS, SATS ಹಾಗೂ 6 ರಿಂದ 10ನೇ ತರಗತಿವರೆಗಿನ ಗಣಿತ ಪಠ್ಯಪುಸ್ತಕದ ಸಮಸ್ಯೆಗಳ ವಿಡಿಯೋಗಳು

ಸರಕಾರಿ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ನೌಕರರ ವೇತನವನ್ನು HRMS Project ಮೂಲಕ ಸೆಳೆಯುವ ವ್ಯವಸ್ಥೆಯನ್ನು ಕರ್ನಾಟಕ ಸರಕಾರವು ಮಾಡಿರುತದೆ. ವೇತನ ಸೆಳೆಯುವಲ್ಲಿ ಕಛೇರಿ ಮುಖ್ಯಸ್ಥರು ಹಾಗೂ ಕಛೇರಿ ಸಹಾಯಕರಿಗೆ ಅನುಕೂಲವಾಗುವಂತೆ ಕೇವಲ ಮಾಹಿತಿಗೋಸ್ಕರ ವಿಡಿಯೋ ತರಬೇತಿಯನ್ನು ಒದಗಿಸಲಾಗಿದೆ. ವೇತನ ಬಿಲ್ಲು ಮಾಡುವುದಲ್ಲದೇ HRMSನಲ್ಲಿ ಸಿಬ್ಬಂದಿಯವರ / ನೌಕರರ ಮಾಹಿತಿಯನ್ನು ಸೇರಿಸುವ ಬಗೆ, ನೌಕರರ ಸೇವಾ ವಿವರವನ್ನು ನಮೂದಿಸುವ ಬಗೆಯನ್ನು ವಿವರಿಸಲಾಗಿದೆ. ಹಣ ಸೇಳೆಯುವ ಹಾಗೂ ಕಛೇರಿ ಸಹಾಯಕರಿಗೆ ಅತ್ಯವಶ್ಯಕವಾಗಿರುವ ಮಾಹಿತಿಯನ್ನು ಒದಗಿಸಲಾಗಿದೆ.

ಎಂ.ಎಸ್.ಆಫೀಸ್(‌Microsoft Office) ತರಬೇತಿ:

ಮೈಕ್ರೋಸಾಫ್ಟ್‌ ಆಫೀಸ್ ಇದು ದೈನಂದಿನ ಉಪಯೋಗಿಕ ಗಣಕ ತಂತ್ರಾಂಶವಾಗಿದೆ. ಈಗ ಎಲ್ಲಾ ಸರಕಾರಿ ಹಾಗೂ ಖಾಸಗಿ ಕಛೇರಿಗಳಲ್ಲಿ ಇದರ ಉಪಯೋಗ ನಿರಂತರವಾಗಿದೆ ಸಾಗಿದೆ.